×
Login

೨೮ ಲಕ್ಷ ವೆಚ್ಚದ ನೂತನ ಗ್ರಾಮ ಪಂಚಾಯತಿ ಕಟ್ಟಡಕ್ಕೆ ಶಾಸಕರಿಂದ ಉದ್ಘಾಟನೆ.

0 Comments । By Black Cat News । 24 August, 2021

೨೮ ಲಕ್ಷ ವೆಚ್ಚದ ನೂತನ ಗ್ರಾಮ ಪಂಚಾಯತಿ ಕಟ್ಟಡಕ್ಕೆ ಶಾಸಕರಿಂದ ಉದ್ಘಾಟನೆ


ಚಿಕ್ಕಬಳ್ಳಾಪುರ (ಗುಡಿಬಂಡೆ): ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಗ್ರಾಮಗಳನ್ನು ಅಭಿವೃದ್ದಿ ಮಾಡುವುದೇ ನನ್ನ ಮುಖ್ಯ ಧ್ಯೇಯ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ತಾಲ್ಲೂಕಿನ ದಪ್ಪರ್ತಿ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯತಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಗಳ ಅಭಿವೃದ್ದಿಯೇ ದೇಶದ ಅಭಿವೃದ್ದಿಯಾಗಿದ್ದು, ಗ್ರಾಮಗಳಲ್ಲಿನ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನನ್ನ ಮುಖ್ಯ ಗುರಿಯಾಗಿದೆ. ಈಗಾಗಲೇ ಸಾರ್ವಜನಿಕರು ತಿಳಿಸದಂತಹ ಬಹುತೇಕ ಕಾಮಗಾರಿಗಳನ್ನೇಲ್ಲಾ ಪೂರ್ಣಗೊಳಿಸಿದ್ದೇನೆ. ಇನ್ನೂ ಬತ್ತಲಹಳ್ಳಿ ಗ್ರಾಮದಿಂದ ಹಂಪಸಂದ್ರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ೯ ಕೋಟಿ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ದಪ್ಪರ್ತಿ ಗ್ರಾ.ಪಂ. ಕೇಂದ್ರದಿಂದ ತಾಲ್ಲೂಕು ಕೇಂದ್ರಕ್ಕೆ ಶೀಘ್ರವಾಗಿ ಹೋಗಲು ದಪ್ಪರ್ತಿ ಒಡ್ಡು ಕುಂಟೆಯ ಮೇಲ್ಭಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಸಾರ್ವಜನಿಕರು ಮನವಿ ಮಾಡಿದ್ದು, ಸುಮಾರು ೧.೫ ಕೋಟಿ ಬೇಕಾಗುತ್ತದೆ. ಈ ಕಾಮಗಾರಿಯನ್ನು ಸಹ ಶೀಘ್ರದಲ್ಲೇ ಪ್ರಾರಂಭ ಮಾಡಲು ಅಗತ್ಯ ಕ್ರಮಗಳನ್ನು ಈಗಾಗಲೇ ತೆಗೆದುಕೊಂಡಿದ್ದೇನೆ ಎಂದರು.
ಪಟ್ಟಣದ ಸಮೀಪದ ಅಮಾನಿಬೈರಸಾಗರ ಕೆರೆಯಿಂದ ಒಂದು ವರ್ಷದೊಳಗೆ ದಪ್ಪರ್ತಿ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಚಿಕ್ಕತಮ್ಮನಹಳ್ಳಿ ರಸ್ತೆ ಗ್ಯಾದರಮಾಕಲಹಳ್ಳಿ ರಸ್ತೆ ಅಭಿವೃದ್ದಿ ಕಾಮಗಾರಿ ಕೆಲಸ ನಡೆಯುತ್ತಿದ್ದು ಈಗಾಗಲೇ ಗುಡಿಬಂಡೆ ತಾಲ್ಲೂಕಿನಲ್ಲಿ ಚುನಾವಣಾ ಸಮಯದಲ್ಲಿ ಅಶ್ವಾಸನೆ ನೀಡಿದ ಅಭಿವೃದ್ದಿ ಕೆಲಸಗಳಲ್ಲಿ ಶೇ.೯೦ ರಷ್ಟು ಅಭಿವೃದ್ದಿಯಾಗಿದ್ದು ಉಳಿದ ಸೇ.೧೦ ರಷ್ಟು ಕೆಲಸಗಳು ಮುಂದಿನ ಚುನಾವಣೆ ಹೊತ್ತಿಗೆ ಅಭಿವೃದ್ದಿ ಪಡಿಸಲಾಗುವುದು. ವಿರೋಧ ಪಕ್ಷದ ಕೆಲವು ಅಭ್ಯರ್ಥಿಗಳು ಈಗಾಗಲೇ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದು ತಾಲ್ಲೂಕಿನ ಅಭಿವೃದ್ದಿ ಸಹಿಸದೇ ವಿನಾ ಕಾರಣ ಅರೋಪಗಳು ಮಾಡುತ್ತಿದ್ದಾರೆ. ಆದರೆ ಸಾರ್ವಜನಿಕರೇ ಅದರ ಬಗ್ಗೆ ಉತ್ತರ ನೀಡುತ್ತಾರೆ ಎಂದರು.
ಈ ವೇಳೆ ತಾ.ಪಂ. ಇ.ಒ ರವೀಂದ್ರ, ಜಿ.ಪಂ. ಎಇಇ ರಘುನಾಥಮೂರ್ತಿ, ಗ್ರಾ.ಪಂ. ಪಿಡಿಒ ರಾಮಂಜಿ, ಅಧ್ಯಕ್ಷೆ ಶ್ರಿಲ್ಪ ಹರೀಶ್, ಉಪಾಧ್ಯಕ್ಷೆ ಲಕ್ಷ್ಮಮ್ಮ, ಸದಸ್ಯರಾದ ಮುರಳಿ. ವಾಣಿ. ಲೋಕೇಶ್, ಪ್ರಶಾಂತ, ಸರಸ್ವತಮ್ಮ, ಶ್ವೇತ, ಮುಖಂಡ ನಂಜುಂಡ, ಕೃಷ್ಣೇಗೌಡ, ಕೃಷ್ಣಪ್ಪ ಸೇರಿದಂತೆ ಹಲವರು ಇದ್ದರು.

Balaji R's Report
BlackCatNews, Chikkaballapur




Also Read

×